ಚಿತ್ರ: ಓಂ
ಸಾಹಿತ್ಯ: ಹಂಸಲೇಖ
ಸಂಗೀತ: ಹಂಸಲೇಖ
ಗಾಯನ: ಡಾ.ರಾಜ್‍ಕುಮಾರ್ ಗಾಯನ

ಓ ಗುಲಾಬಿಯೇ! ಓಹೋ ಗುಲಾಬಿಯೇ
ನಿನ್ನಂದ, ಚೆಲುವಿಂದ, ಸೆಳೆಯೋದೆ ಪ್ರೇಮವೇ? ಓಹೋ!
ಮುಳ್ಳಿಂದ, ಬಾಳಂದ, ಕೆಡಿಸೋದು ನ್ಯಾಯವೇ?
ಓ ಗುಲಾಬಿಯೇ! ಓಹೋ ಗುಲಾಬಿಯೇ   ||ಪಲ್ಲವಿ||

ದ್ವೇಷವಾ ಸಾಧಿಸಿ, ಪ್ರೇಮದಾ ಅಸ್ತ್ರದಿ
ಮೀನಿನ ಹಾಡಿಗೆ, ಹಾಡಿನ ಧಾಟಿಗೆ
ವಿನಯದ ತಾಳವೇ ಭಾವಕೆ ವಿಷದಾ ಲೇಪವೇ?

ಹೆಣ್ಣು ಒಂದು ಮಾಯೆಯ, ರೂಪ ಎಂಬ ಮಾತಿದೆ
ಹೆಣ್ಣು ಕ್ಷಮಿಸೊ ಭೂಮಿಯ, ರೂಪ ಎಂದು ಹೇಳಿದೆ
ಯಾವುದು, ಯಾವುದು ನಿನಗೆ ಹೋಲುವುದಾವುದು?
ಯಾವುದು, ಯಾವುದು ನಿನಗೆ ಹೋಲುವುದಾವುದು?

||ಪಲ್ಲವಿ||

ಮನ್ನಿಸು ಮನ್ನಿಸು ಎಲ್ಲವಾ ಮನ್ನಿಸು
ನೊಂದಿರೋ ಮನಸಿಗೆ ಬೆಂದಿರೋ ಕನಸಿಗೆ
ಮಮತೆಯ ಚಿಮುಕಿಸು, ನಿನ್ನಯ ಪ್ರೀತಿಯ ಒಪ್ಪಿಸು

ಒಂದು ಬಾರಿ ಪ್ರೀತಿಸಿ, ಒಲ್ಲೆ ಎಂದು ಹೇಳುವೆ
ಪ್ರೀತಿ ಮರೆತು ಹೋಗಲೂ, ಹೆಣ್ಣೆ ನೀನು ಸೋಲುವೆ
ಏನಿದೆ ಏನಿದೆ, ನಿನ್ನಯ ಮನದೊಳಗೇನಿದೆ?
ಏನಿದೆ ಏನಿದೆ, ನಿನ್ನಯ ಮನದೊಳಗೇನಿದೆ?

||ಪಲ್ಲವಿ||

ವರ್ಗ: ಓಂ ಚಲನಚಿತ್ರ
ವರ್ಗ: ಹಂಸಲೇಖ ಸಾಹಿತ್ಯ
ವರ್ಗ: ಡಾ.ರಾಜ್‍ಕುಮಾರ್ ಗಾಯನ
ವರ್ಗ: ಕನ್ನಡ ಚಿತ್ರಸಾಹಿತ್ಯ